ಕಡ್ಹುಕಾರಿ : ಪ್ಯಾಸರಿಫಾರ್ಮಿಸ್ ಗಣದ ಟರ್ಡಿಡೀ ಕುಟುಂಬಕ್ಕೆ ಸೇರಿದ ಹಕ್ಕಿ (ರಾಬಿನ್). ಪ್ರಪಂಚದ ಬಹುಭಾಗಗಳಲ್ಲಿ ಇವು ಇವೆ. ಸಾಮಾನ್ಯ ಬಳಕೆಯಲ್ಲಿ ರಾಬಿನ್ ಎಂಬ ಹೆಸರು ಕುಟುಂಬದ ಹಲವಾರು ಜಾತಿಯ ಹಕ್ಕಿಗಳಿಗೆ ಅನ್ವಯವಾಗುತ್ತದೆ. ಉದಾಹರಣೆಗೆ 

ಅಮೆರಿಕದಲ್ಲಿ ಟರ್ಡಸ್ ಮೈಗ್ರಟೋರಿಯಸ್, ಯುರೋಪಿನಲ್ಲಿ ಎರಿತೇಕಸ್, ರೂಬಿಕ್ಯುಲ, ಭಾರತದಲ್ಲಿ ಥ್ಯಾಮ್ನೊಬಿಯ ಮುಂತಾದುವು. ಸಾಧಾರಣವಾಗಿ ಇವೆಲ್ಲ ಬಹಳ ಸಣ್ಣ ಗಾತ್ರದ ಹಕ್ಕಿಗಳು. ಇವುಗಳ ಎದೆ ಕೆಂಪು ಬಣ್ಣದ್ದು.
ಭಾರತದ ಕಡ್ಹುಕಾರಿಯ ಬಣ್ಣ ಬೂದು, ಕಂದು ಅಥವಾ ಬಿಳಿ ಮತ್ತು ಕಪ್ಪು ಮಿಶ್ರಿತ. ತಲೆ ಮತ್ತು ಎದೆಯ ಭಾಗದಲ್ಲಿ ಬಿಳಿಯ ಮತ್ತು ಕಪ್ಪು ಮಚ್ಚೆಗಳಿವೆ. ಕೆಲವು ಬಾರಿ ರೆಕ್ಕೆಗಳ ಮೇಲೂ ಮಚ್ಚೆಗಳಿರಬಹುದು. ಹೆಣ್ಣು ವiತ್ತು ಗಂಡುಗಳು ನೋಡಲು ಒಂದೇ ತೆರನಾಗಿದ್ದರೂ 

ಗಂಡಿಗಿಂತ ಹೆಣ್ಣು ಮಾಸಲು ಬಣ್ಣದ್ದು. ಇದರ ಆಹಾರ ಕೀಟಗಳು. ಸಾಮಾನ್ಯವಾಗಿ ಗೋಡೆಗಳಲ್ಲಿನ ಬಿರುಕುಗಳಲ್ಲಿ ಮರಗಳಲ್ಲಿ ಗೂಡು ಕಟ್ಟುತ್ತದೆ. ಹೆಣ್ಣು ಒಂದು ಸಾರಿಗೆ 5-6 ಮೊಟ್ಟೆಯಿಡುತ್ತದೆ. ಸದಾಕಾಲ ಹಾಡಿಕೊಂಡು ಕಾಲಕಳೆಯುವ ಈ ಹಕ್ಕಿ ತನ್ನ 

ಸ್ನೇಹಪರತೆಯಿಂದಾಗಿ ಮಾನವನ ಮೆಚ್ಚುಗೆ ಗಳಿಸಿದೆ. 	(ಎಲ್.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ